ಮಂಗಳೂರು: ಕರಾವಳಿಯ ಮಣ್ಣಿಗೆ ಭಾವನೆಗಳನ್ನು ಕೆರಳಿಸುವ ರಾಜಕಾರಣಕ್ಕಿಂತ ಜನರ ಬದುಕನ್ನು ಹಸನು ಮಾಡುವ ನೈಜ ಅಭಿವೃದ್ಧಿಯ ಸ್ಪರ್ಶ ಬೇಕಿತ್ತು. ಮಂಗಳೂರಿನ ಪವಿತ್ರ ನೆಲದಲ್ಲಿ ಜರುಗಿದ ಸಚಿವ ಸಂಪುಟ ಸಭೆಯ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರಾವಳಿಯ ಕೋಟ್ಯಂತರ ಜನರ ಭಾವನಾತ್ಮಕ ಕನಸುಗಳಿಗೆ ಜೀವ ತುಂಬಿ ಹೊಸ ಇತಿಹಾಸವನ್ನೇ ಬರೆದಿದೆ. “ನಾವು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ, ಬದಲಾಗಿ ಅವರ ಬದುಕಿನ ಏಳಿಗೆಗಾಗಿ ಆಡಳಿತ ನಡೆಸುತ್ತೇವೆ” ಎಂಬ ದೃಢ ಸಂಕಲ್ಪ ಈ ಸಭೆಯ ಪ್ರತಿಯೊಂದು ದಿಟ್ಟ ನಿರ್ಧಾರದಲ್ಲೂ ನಿಚ್ಚಳವಾಗಿ ಸಾಬೀತಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಮಿತಿ ಪದ್ಮರಾಜ್ ಆರ್. ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

