Author: admin

ಮಂಗಳೂರು(reporterkarnataka.com): ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು. ಮುಖಂಡರಾದ ಟಿ.ಕೆ.ಸುಧೀರ್, ಭರತೇಶ್ ಅಮೀನ್, ಜೀತೇಂದ್ರ ಜೆ.ಸುವರ್ಣ, ಯೋಗಿಶ್ ಕುಮಾರ್, ಉದಯ್ ಆಚಾರ್ಯ, ಹನೀಫ್ ಬಜಾಲ್, ವೆಲ್ವಿನ್, ವಿನೋದ್ ರಾಜ್ ಪಣಂಬೂರು, ಲಕ್ಷ್ಮಣ್ ಶೆಟ್ಟಿ, ಪ್ರಶಾಂತ್ ಅಮೀನ್, ಉದಯ್ ಕುಂದರ್ ಉಪಸ್ಥಿತರಿದ್ದರು.

Read More

ಬೆಂಗಳೂರು(reporterkarnataka.com): ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಮೊದಲ ವಿಕೆಟ್ ಪತನಗೊಂಡಿದೆ. ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ತಮ್ಮ ರಾಜೀನಾಮೆಗೆ ಖಾತೆ ಕಾರಣ ವಲ್ಲ, ನೋವು ಎಂದಿದ್ದಾರೆ. ನಿನ್ನೆಯಷ್ಟೇ 13 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಮಂತ್ರಿಗಳು ತಮ್ಮ ತಮ್ಮ ಇಲಾಖೆ ಅಧಿಕಾರಿಗಳ ಜೊತೆ ಮೀಟಿಂಗ್ ಆರಂಭಿಸಿದ್ರೆ, ಇತ್ತ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್ ಹಾಗೂ ಹೊಸ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದ್ದಾರೆ.

Read More

ಮಂಗಳೂರು(reporterkarnataka.com): ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಲಿಖಿತ್ ಶೆಟ್ಟಿ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.

Read More

ಮಂಗಳೂರು(reporterkarnataka.com): ವಿಶನ್ ಕೊಂಕಣಿ ನಿರ್ಮಾಣದ ದಾಯ್ಜಿವರ್ಲ್ಡ್ ಫಿಲ್ಮ್ಸ್ ಬ್ಯಾನರಿನಡಿ ತಯಾರಾದ ಬಹುನಿರೀಕ್ಷಿತ ಕೊಂಕಣಿ ಚಿತ್ರ ’ಬಾಪಾಚೆ ಪುತಾಚೆ ನಾಂವಿಂ’ ನವೆಂಬರ್ 28ರಂದು ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ತೆರೆಕಾಣಲಿದೆ. ಚಿತ್ರವು ಈಗಾಗಲೇ ಹಲವು ಪ್ರೀಮಿಯರ್ ಪ್ರದರ್ಶನಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಪ್ರೇಕ್ಷಕರಿಂದ ಹಾಗೂ ಸಿನೆಮಾ ವಿಶ್ಲೇಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಯುವ ಸಾಹಿತಿ, ಪತ್ರಕರ್ತ ಸ್ಟ್ಯಾನಿ ಬೇಳ ಬಾಪಾಚೆ ಪುತಾಚೆ ನಾಂವಿಂ ಚಿತ್ರಕ್ಕೆ ಕಥೆ , ಸಂಭಾಷಣೆ ಬರೆದು, ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂಜಯ್ ರಾಡ್ರಿಗಸ್ ಹಿನ್ನಲೆ ಸಂಗೀತವಿದೆ. ಯುವ ಛಾಯಾಗ್ರಾಹಕ ಜೋಯಲ್ ಶಮನ್ ಕ್ಯಾಮೆರಾ ಚಲಾಯಿಸಿದ್ದಾರೆ. ಉಡುಪಿ, ಪುತ್ತೂರು ಹಾಗೂ ದೇರಳಕಟ್ಟೆಯಲ್ಲಿ ಡಿಸೆಂಬರ್ 5ರಂದು ಚಿತ್ರವು ತೆರೆಕಾಣಲಿದೆ ಎಂದು ನಿರ್ಮಾಣ ಸಂಸ್ಥೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ

Read More

ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ ‘ಗಜಾನನ ಕ್ರಿಕೆಟರ್ಸ್’ (ಜಂತೊಟ್ಟು ಸಿನ್ಸ್ 1983) ತುಳು ಚಲನಚಿತ್ರವು ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿದೆ. ಭಾರತ್ ಸಿನಿಮಾಸ್ ನಲ್ಲಿ ಸಿನಿಮಾದ ಬಿಡುಗಡೆ ಸಮಾರಂಭ ಜರಗಿತು. ಅತಿಥಿಗಳು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು. ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ಮಾತನಾಡಿ, ತುಳು ಸಿನಿಮಾ ರಂಗದಲ್ಲಿ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಕಿರಿಯರು, ಹೊಸಬರು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಯುವ ಪ್ರತಿಭಾವಂತರು ಸಿನಿಮಾರಂಗದಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಚೆನ್ನಾಗಿ ಆಡಲಿ ಎಂದರು. ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ಗಜಾನನ ಕ್ರಿಕೆಟರ್ಸ್ ಸಿನಿಮಾದ ಪ್ರೀಮಿಯರ್ ಶೋಗಳನ್ನು ಪ್ರೇಕ್ಷಕರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ಪ್ರಜ್ವಲ್ ಶೆಟ್ಟಿ, ರೋಹನ್ ಪಿರೇರ, ಸಂತೋಷ್ ಲಾಡ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು. ಉದ್ಯಮಿ ಮೈಕಲ್ ಡಿ ಸೋಜ…

Read More

ಮಂಗಳೂರು(reporterkarnataka.com): ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಹಿರಿಯ ರಂಗಕರ್ಮಿ ಡಾ.ದೇವದಾಸ್ ಕಾಪಿಕಾಡ್ ಅವರು, “ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಜೈ ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಂದು ತುಳು ಸಿನಿಮಾಕ್ಕೂ ಬೆಂಬಲ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ತುಳುವರು ಸಿನಿಮಾ ನೋಡುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು” ಎಂದರು.

Read More

ಮಂಗಳೂರು(reporterkarnataka.com): “ಜಯಕಿರಣ ಫಿಲಂಸ್ ಲಾಂಛನದಲ್ಲಿ , ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಅದ್ಭುತವಾಗಿ ಸಿದ್ಧಗೊಂಡಿರುವ ನಾನ್‌ ವೆಜ್ ತುಳು ಸಿನಿಮಾ ಫೆಬ್ರವರಿ 6ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ, ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್‌ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ. ದುಬಾರಿ ಟಿಕೆಟ್‌ ಕೊಟ್ಟು ಸಿನಿಮಾ ನೋಡಲು ಸಾಧ್ಯವಾಗದವರು ಇಂಥದ್ದೊಂದು ಸುಂದರ ಹಾಗೂ ಅತ್ಯುತ್ತಮ ಸಿನಿಮಾವನ್ನು ನೋಡದೆ ಇರಬಾರದು ಎಂಬ ಉದ್ದೇಶದಿಂದ ಕೇವಲ 99 ರೂ. ಟಿಕೆಟ್‌ ನಿಗದಿಪಡಿಸಿದ್ದು, ಇದು ತುಳುಚಿತ್ರರಂಗದಲ್ಲಿ ಒಂದು ಹೊಸ ಸಂಚಲನ ಉಂಟು ಮಾಡಿದೆ. ಸಿಂಗಲ್‌ ಥಿಯೇಟರ್‌ಗಿಂತಲೂ ಕಡಿಮೆ ದರದಲ್ಲಿ ಈ ಸಿನಿಮಾವನ್ನು ತುಳು ಪ್ರೇಮಿಗಳು ಮಲ್ಟಿಫ್ಲೆಕ್ಸ್ ಗಳಲ್ಲಿ ನೋಡುವಂತಹ ಅವಕಾಶ ಇದಾಗಿದೆ“ ಎಂದು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Read More

ಪ್ರಸ್ತುತ ಕಾಲದಲ್ಲಿ ಜನಪ್ರತಿನಿಧಿಯೆಂದರೇ ಏನೋ ರಾಜ ಎಂಬಂತೆ ಭಾಸವಾಗುತ್ತದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವೆ ಮಾಡುವುದಕ್ಕಾಗಿ ಎಂಬುದನ್ನು ಮರೆತಂತಿದೆ. ಕಾರಿನಲ್ಲಿ ‌ನಾಲ್ಕು ಜನರೊಂದಿಗೆ ಬಂದು ಇಳಿದು ಅದನ್ನು ನಮ್ಮೂರ‌ ಕಾಯೋ‌ ದೊರೆಯೇ ಎಂಬ ಹಾಡಿಗೆ ವಿಡಿಯೋ ಮಾಡಿ ಹಾಕಿದರೇ ಆಗಲಿಲ್ಲ. ಎಷ್ಟೇ ದೊಡ್ಡ ಜನಪ್ರತಿನಿಧಿಯಾಗಲಿ ಜನಸಾಮಾನ್ಯ ಕರೆ ಮಾಡಿದರೆ ಸ್ವೀಕರಿಸುವ ಸೌಜನ್ಯತೆ ಇರಬೇಕು. ಒಂದೊಮ್ಮೆ ಕಾರ್ಯಕ್ರಮದಲ್ಲೋ, ಸಭೆಯಲ್ಲೋ ಇದ್ದರೆ ಮಿಸ್ ಕಾಲ್ ನೋಡಿ ವಾಪಾಸು ‌ಕರೆ ಮಾಡುವ ಪರಿಜ್ಞಾನ ಇರಬೇಕು. ಜನರ ತೆರಿಗೆಯ ಹಣದಿಂದ ಓಡಾಡಲು ಕಾರು, ಪೋನ್ ಬಿಲ್, ಸಂಬಳ ತಿನ್ನುವ ನೀವುಗಳು ಜನರ ಸಮಸ್ಯೆ ಅಥವಾ ನೋವಿಗೆ‌ ಸ್ಪಂದಿಸುವ ಗುಣ, ಯೋಚನೆ ನಿಮ್ಮಲ್ಲಿ ಇಲ್ಲದಿದ್ದರೆ ನೀವು ಯಾವ ಕೆಲಸ ಮಾಡಿದರೂ, ಎಷ್ಟೇ ‌ದೊಡ್ಡ ವ್ಯಕ್ತಿಯಾದರೂ ನಗಣ್ಯವೇ. ಗೆದ್ದು ಶಾಸಕರಾಗಿ, ಸಂಸದರಾಗಿ, ಪರಿಷತ್ ನ ಹುದ್ದೆಯನ್ನು ಪಡೆದ ನಂತರ ಜನಸಾಮಾನ್ಯರ ಜೊತೆ ಬೆರೆಯುವುದನ್ನು ‌ಕಳಿಯಿರಿ. ಗೆದ್ದ ನಂತರ ನೀವು ಒಂದು ಪಕ್ಷದ ವ್ಯಕ್ತಿಯಲ್ಲ ಆಯಾ ಕ್ಷೇತ್ರದ ಜನಪ್ರತಿನಿಧಿಯಾಗಿರುತ್ತೀರಿ ನೆನಪಿಡಿ.…

Read More

‘ಭತ್ತದ ತಳಿಯ ಕಾವಲುಗಾರ’ ಈ ಪುಸ್ತಕ ಮರೆತು ಹೋಗುತ್ತಿರುವ ಅನ್ನ ದಾರಿಯ ಹಾದಿಯನ್ನು ಮತ್ತೆ ನಮ್ಮ ಕೈಗೆ ಒಪ್ಪಿಸುವ ಪ್ರಯತ್ನ. ಅನ್ನವನ್ನು ಕೇವಲ ಆಹಾರವಾಗಿ ಅಲ್ಲ, ಒಂದು ಜೀವ ಸಂಸ್ಕೃತಿಯಾಗಿ ನೋಡುವ ದೃಷ್ಟಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ. ಭತ್ತ ಎನ್ನುವುದು ಕೇವಲ ಒಂದು ಬೆಳೆ ಅಲ್ಲ, ಅದು ನೆಲದ ಉಸಿರು. ಮಣ್ಣಿನ ನೆನಪು. ಮಳೆ, ಬೆವರು, ಹಸಿವು,ಸೂರ್ಯ, ತಾಳ್ಮೆ, ನಿರೀಕ್ಷೆ, ಪೂರ್ವ ಪರಂಪರೆ ಇವೆಲ್ಲವೂ ಸೇರಿ ರೂಪುಗೊಳ್ಳುವ ಒಂದು ಸಂಸ್ಕೃತಿಯ ಸಂಕೇತ. ಸಾವಿರಾರು ವರ್ಷಗಳ ಕಾಲ ರೈತರು ತಮ್ಮ ಅನುಭವದಿಂದ ಕಾಪಾಡಿಕೊಂಡು ಬಂದ ತಳಿ ವೈವಿಧ್ಯ ಇಂದು ನಿಧಾನವಾಗಿ ನಮ್ಮ ಕೈಗಳಿಂದ ಜಾರಿ ಹೋಗುತ್ತಿದೆ. ಸುಲಭದ ದಾರಿಯ ಹುಡುಕಾಟದಲ್ಲಿ, ಅಧಿಕ ಇಳುವರಿಯ ಮರುಳು ಜಾಲದಲ್ಲಿ, ನಾವು ನಮ್ಮದೇ ಮೂಲಬಲವನ್ನು ಮರೆತಿದ್ದೇವೆ. ಈ ಮರೆವಿನ ಮಧ್ಯೆ, ಒಂದು ಪುಟ್ಟ ಗುಡ್ಡೆಯ ತಟ್ಟಿನ ಮೇಲಿಂದ, ಹತ್ತಿಪ್ಪತ್ತು ಸೆಂಟ್ಸ್ ಜಾಗದಿಂದ, ಒಂದು ಮನುಷ್ಯ ಇಡೀ ದೇಶಕ್ಕೆ ಒಂದು ಜಾಣ್ಮೆಯ ಗಂಟೆ ಹೊಡೆಯುತ್ತಾನೆ. ಅವರೇ ಸತ್ಯನಾರಾಯಣ ಬೆಳೇರಿ. ಈ…

Read More

ನನ್ನ ಮನೆಯಲ್ಲಿರುವ ಇಷ್ಟೊಂದು ಪುಸ್ತಕಗಳನ್ನು ಮುಂದೆ ನಾನೇನು ಮಾಡಲಿ? ಆ ಹಿರಿಯರ ಇದೊಂದು ಪ್ರಶ್ನೆ ಮೊನ್ನೆಯಿಂದ ನನ್ನನ್ನು ಕಾಡುತ್ತಲೇ ಇದೆ. ಅದು ಬರೀ ಅವರೊಬ್ಬರ ಏಕಾಂಗಿ ಕಳವಳವಲ್ಲ. ಆ ಆತಂಕ ಅವರ ಬಾಯಿಂದ ಬಂದದ್ದಾದರೂ, ಅದರ ಕರಿನೆರಳು ಹಲವರ ಮನೆಯಲ್ಲೂ ಹಬ್ಬಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಆರೇಳು ಮಂದಿ ಹಿರಿಯ ಬರಹಗಾರರು, ಓದುಗರು, ವಿಮರ್ಶಕರು, ಪತ್ರಕರ್ತರು, ಸಾಹಿತಿಗಳು, ಪ್ರಾಧ್ಯಾಪಕರು ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಶಬ್ದಗಳಲ್ಲಿ ಇದೇ ಅರ್ಥದ ಪ್ರಶ್ನೆಯನ್ನು ಮುಂದೆ ಇಟ್ಟಿದ್ದಾರೆ. ಹೌದು, ಕೆಲವರ ಮನೆಗಳಲ್ಲಿ ಪುಸ್ತಕಗಳು ರಾಶಿ ರಾಶಿಯಾಗಿ ಬಿದ್ದಿವೆ. ಓದಿ ಮುಗಿಸಿದ ಕೃತಿಗಳು, ಮನೆಯ ಬಹು ಜಾಗ ಹಿಡಿದಿರುವ ಡೈಜೆಸ್ಟ್‌ಗಳು, ಯಾವುದೋ ಕಾಲದಿಂದ ಅವರಿಗೆ ಬಂದ ಗೌರವ ಪ್ರತಿಗಳು, ಕಾಲದ ವಾಸನೆ ಹೊತ್ತ ನಿಯತಕಾಲಿಕಗಳು, ಮಡಚಿ ಇಟ್ಟ ದಿನಪತ್ರಿಕೆಗಳು, ಮಣಬಾರದ ಗಂಭೀರ ಸಂಶೋಧನಾ ಗ್ರಂಥಗಳು, ಅಟ್ಟದಲ್ಲಿ, ಕಿಟಕಿಯ ಅಂಚಿನಲ್ಲಿ, ಊಟದ ಟೇಬಲ್ ನಲ್ಲಿ, ಎಲ್ಲೆಲ್ಲಿ ಜಾಗ ಉಂಟು ಅಲ್ಲೆಲ್ಲಾ ಹರಡಿಕೊಂಡ ಇವೆಲ್ಲವೂ ಒಟ್ಟಿಗೆ ಮನೆ ತುಂಬಾ…

Read More