Author: admin
ಕೋಲಾರ:ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲಾದ್ಯಂತ ಇರುವ ಮಾವು ಬೆಳೆಗಾರರು ಇಂದು ಸೋಮವಾರ ಮಾವು ಬೆಂಬಲ ಬೆಲೆ ನೋಂದಣಿಗೆ ಅವಕಾಶ ಕಲ್ಪಿಸಿ ಅವಧಿ ವಿಸ್ತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಜಿಲ್ಲಾಡಳಿತ ಭವನದ ಮೆಟ್ಟಿಲುಗಳ ಕುಳಿತು ಬೆಳಗಿನಿಂದ ಪ್ರತಿಭಟನೆ ನಡೆಸಿದ್ದು ಸರ್ಕಾರದಿಂದ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಮಾವು ಬೆಳೆಗಾರರು ಆಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಸಂಜೆ ಮುಬ್ಬುಗತ್ತಲೆಯಲ್ಲಿ ಜಿಲ್ಲಾಡಳಿತ ಭವನದ ಮೆಟ್ಟಿಲಿನ ಮೇಲೆ ಕುಳಿತ ಮಾವು ರೈತರು ಸರ್ಕಾರದ ನಿಲವು ಹಾಗು ಆಡಳಿತ ರೂಡ ರಾಜಕಾರಣಿಗಳ ನಿರ್ಲಕ್ಷ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಈ ಸಂದರ್ಭದಲ್ಲಿ ಕೋಲಾರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ದಿ, ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ರೈತ ಮುಖಂಡ ಫಾರೂಖ್ ನಾಗರಾಜ್, ಅಭಿಲಾಷ್ ರೆಡ್ದಿ ಜಿಲ್ಲಾದ್ಯಂತ ಇರುವ ಮಾವು ಬೆಳೆಗಾರರು ಭಾಗವಹಿಸಿದ್ದಾರೆ.
ಚಿಂತಾಮಣಿ: ಚಿಂತಾಮಣಿ ತಾಲೂಕಿನ ಮುರಗಮಲ್ಲ ಹೋಬಳಿಯ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಪಲ್ಲಿ ಗ್ರಾಮದಲ್ಲಿ ನೂತನವಾಗಿ ಗ್ರಾಮದ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ಕುಟುಂಬದವರಿಂದ ನಿರ್ಮಿಸಲಾದ ಶ್ರೀ ರುಕ್ಮಿಣಿ ಸಮೇತ ಪಾಂಡುರಂಗ ವಿಠಲ ಮಂದಿರವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆ ಮಾಡಲಾಯಿತು. ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿಶ್ವಕ್ಸೆನ ಪೂಜೆ, ಪುಣ್ಯಾಹವಾಚನ, ಕಲಶ ಪ್ರತಿಷ್ಠಾಪನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ವೇದಪಂಡಿತರ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಳಿಕ ಪಾಂಡುರಂಗ ವಿಠಲನಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು.
ಆದ್ಯಾತ್ಮಿಕ ಡೆಸ್ಕ್:ವಿಜ್ಞಾನ ಭೈರವ ತಂತ್ರವು ಪ್ರಾಚೀನ ಕಾಶ್ಮೀರಿ ವಿದ್ವಾಂಸರಲ್ಲಿ ಬಹಳ ಪ್ರಸಿದ್ಧವಾದ ಗ್ರಂಥ ಇದು ರುದ್ರಾಯಮಲ ತಂತ್ರದ ಒಂದು ಶಾಖೆ. ವಿಜ್ಞಾನ ಭೈರವ ತಂತ್ರವು ಕಾಶ್ಮೀರ ಶೈವ ಧರ್ಮದ ಒಂದು ಪವಿತ್ರ ಗ್ರಂಥವಾಗಿದ್ದು, ಇದರಲ್ಲಿ 112 ವಿವಿಧ ಧ್ಯಾನ ತಂತ್ರಗಳನ್ನು ವಿವರಿಸಲಾಗಿದ್ದು, ಶಿವ ಮತ್ತು ಪಾರ್ವತಿಯ ನಡುವಿನ ಸಂಭಾಷಣೆಯ ರೂಪದಲ್ಲಿರುವ ಈ ಗ್ರಂಥ, ನಿಜ ಸ್ವರೂಪದ ನೈಜತೆಯನ್ನು ಅರಿಯಲು ಸಹಾಯ ಮಾಡುತ್ತದೆ. ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿರುತ್ತದೆ. ಉಸಿರಾಟದ ನಿಯಂತ್ರಣ, ದೇಹದ ಕೇಂದ್ರಗಳ ಮೇಲೆ ಏಕಾಗ್ರತೆ, ಮಂತ್ರ ಪಠಣ ಮತ್ತು ಇಂದ್ರಿಯಗಳ ಬಳಕೆಯಂತಹ ವಿವಿಧ ವಿಧಾನಗಳನ್ನು ಇದು ಒಳಗೊಂಡಿರುತ್ತದೆ
ಶ್ರೀನಿವಾಸಪುರ: ಶ್ರಾವಣ ಮಾಸದ ಶನಿವಾರಗಳಂದು ‘ಶ್ರೀನಿವಾಸಾಯ ಮಂಗಳಂ ಶ್ರೀ ವೆಂಕಟೇಶಾಯ ಮಂಗಳಂ ಎಂದು ಕೆಲವರು ‘ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ…’ ಎನ್ನುತ್ತ ಭಗವಂತನ ನಾಮ ಸ್ಮರಣೆಯೊಂದಿಗೆ ಸಣ್ಣ ವಯಸ್ಸಿನ ವಟುಗಳಿಂದ ಹಿಡಿದು ಹಿರಿಯ ವಯಸ್ಸಿನವರವರೆಗೆ ನೆರೆಹೊರೆಯವರ ಮನೆಗಳಲ್ಲಿ ‘ಪಡಿ’ ಬೇಡುವುದು ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ಚಿಕ್ಕಬಳ್ಳಾಪುರ: ತಾಲೂಕಿನ ಗಂಗರೇಕಾಲುವೆ ಗ್ರಾಮದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಗ್ರಹ ಪ್ರತಿಷ್ಠಾಪನೆ, ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ದೇಹದ ಭಾಗಗಳಿಗೆ ಕಾಡುವ ಕಾಯಿಲೆಗೆ ಕರಿಬೇವು ಮನೆಮದ್ದು ; ಜಠರ ಮತ್ತು ತಲೆ ಕೂದಲಿನ ಸಮಸ್ಯೆಗೆ ಕರಿಬೇವು ಔಷಧೀಯ ಸಸ್ಯಜನ್ಯ ಸಂಪತ್ತು….!
ನಮ್ಮ ಆಹಾರದಲ್ಲಿ ದಿನವೂ ಇರಲಿ ಕರಿಬೇವು….!” ಆರೋಗ್ಯ ಸಮಸ್ಯೆ ನಿವಾರಣೆಗೆ ಎಂದೂ ಕಾಡುವುದಿಲ್ಲ ದೇಹದ ಉಷ್ಣತೆಯ ಕಾವು….!” ಕರಿಬೇವು ಔಷಧೀಯ ಸಸ್ಯ…! ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) ನಮ್ಮ ದೈನಂದಿನ ಅಡುಗೆಯಲ್ಲಿ ಬಳಸುವಂತಹ ಕರಿಬೇವು ದೇಹದಲ್ಲಿನ ಪ್ರತಿಕೂಲ ಪರಿಸ್ಥಿತಿ ಹಾಗೂ ಜಠರ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವುದರೊಂದಿಗೆ, ಮನುಷ್ಯನ ದೇಹಕ್ಕೆ ಬೇಕಾಗುವಂತಹ ವಿಟಮಿನ್ ಗಳನ್ನು ನೀಡುವಲ್ಲಿ ಸಹಕರಿಯಾಗುತ್ತದೆ. ಮನುಷ್ಯನ ದೇಹದಲ್ಲಿನ ಉಷ್ಣಾಂಶವನ್ನು ಇರುವುದರಿಂದ ತಲೆ ಕೂದಲಿನ ಸಮಸ್ಯೆ ತಲೆ ಹೊಟ್ಟು ನಿವಾರಣೆ, ಹಾಗೂ ಅತಿ ಉಷ್ಣವದಂತಹ ಜಾಗದಲ್ಲಿನ ಭಾಗಗಳನ್ನು ವಿಶೇಷ ರೀತಿಯಲ್ಲಿ ಸಂರಕ್ಷಿಸುವುದರ ಮೂಲಕ ಕರಿಬೇವು ಕಾರ್ಯನಿರ್ವಹಿಸುತ್ತದೆ. ಮನುಷ್ಯನ ದಿನಬಳಕೆ ವಸ್ತುಗಳಲ್ಲಿ ಕರಿಬೇವು ಅಗ್ರಪಂತಿಯಲ್ಲಿ ಇರುವುದರಿಂದ ಕೃಷಿಕರು ಎಚ್ಚೆತವಾಗಿ ತಮ್ಮ ಹಿತ್ತಲು ಗಿಡಗಳಲ್ಲಿ ಕರಿಬೇವನ್ನು ಬೆಳೆಸಿ ಇತರರಿಗೆ ಮಾದರಿ ಕೂಡ ಆಗಿದ ಉದಾರಣೆ, ರಾಜ್ಯದ ವಿವಿಧ ಭಾಗದಲ್ಲಿದೆ ಕರಿಬೇವು ನಮ್ಮ ಹಿತ್ತಲಗಳಲ್ಲಿ ಒಂದು ವೈಜ್ಞಾನಿಕ ಉಪಯೋಗಗಳಲ್ಲಿ ದೈನಂದಿನ ಅಡುಗೆ ಪದಾರ್ಥದಲ್ಲಿ ಕರಿಬೇವು…
ಭೂತದ ನೆನಪಿಲ್ಲದ ವರ್ತಮಾನ ಭವಿಷ್ಯದ ಕಲ್ಪನೆ ಮಾಡಲಾರದು,ನೆಲದಲ್ಲಿ ಬೇರಿಳಿಸದ ವೃಕ್ಷ ಆಕಾಶದಲ್ಲಿ ಕೊಂಬೆಗಳನ್ನು ಚಾಚಲಾರದು ಎನ್ನುವ ವಸ್ತುಸ್ಥಿತಿ ನಮಗಿರಬೇಕು.ನಾವು ನಿಸರ್ಗದ ಕೂಸು,ಈ ಪ್ರಕೃತಿ ನಮ್ಮ ಆಡಂಬೋಲ. ನಮ್ಮ ಸಾಂಸ್ಕೃತಿಕ ಪ್ರಜ್ಞೆ, ಪಾರಂಪರಿಕ ಮೌಲ್ಯ, ನಾಗರಿಕತೆಯ ಅರಿವು, ಆಯುರ್ವೇದ ಸ್ಥಾಪಿತ ಆರೋಗ್ಯ ಸೂತ್ರಗಳು, ಜನಪದದ ಆಚರಣೆ, ಗುರುಹಿರಿಯರ ಜೀವನಾದರ್ಶ, ಸಂತರ ಪಥದರ್ಶನ, ದಾರ್ಶನಿಕರ ನಿರೂಪ….ಹೀಗೆ ಭಾರತೀಯ ಮಣ್ಣಲ್ಲಿ ಕಣ್ಣಾಗಿರುವ ಸಾವಿರದ ಸಾವಿರಸಾವಿರ ಜೀವನ ಪದ್ಧತಿಯ ಅಸಂಖ್ಯ ಎಳೆ ಎಳೆಯ ಸದ್ವಿಚಾರಗಳು, ಸದ್ವೃತ್ತದ ಔನ್ನತ್ಯ ನಮ್ಮ ಬದುಕಿನ ಭಾಗವಾಗಬೇಕು.
“ದೇಹದಲ್ಲಿನ ಕೊಬ್ಬಿನಂಶ ಮತ್ತು ಯಕೃತ್ತು ಸಮಸ್ಯೆಯನ್ನು ದೂರ ಮಾಡುವ ಏಕೈಕ ಮನೆಮದ್ದು -“ಬೆಳ್ಳುಳ್ಳಿ ಸೇವನೆ…!”
ಭಾರತೀಯ ಸಾಂಸ್ಕೃತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರತದ ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಜಾಸ್ತಿ ಬಳಸುವುದರಿಂದ ಆರೋಗ್ಯಕರ ಲಕ್ಷಣವು ಪದಾರ್ಥಗಳಲ್ಲಿ ಸೇವನೆ ಮಾಡಬೇಕು. ಬೆಳ್ಳುಳ್ಳಿ ನಮ್ಮ ಅಡುಗೆಯಲ್ಲಿ ಹೆಚ್ಚು ಬಳಸುವುದರಿಂದ ದೇಹದಲ್ಲಿನ ಕೊಬ್ಬಿನಂಶ ಮತ್ತು ನಾರಿನಾಂಶ ಹೆಚ್ಚುಗೊಳಿಸುವುದರೊಂದಿಗೆ ಅದರಲ್ಲಿನ ಪ್ರಾಮುಖ್ಯತೆಯನ್ನು ಕೂಡ ಹಿಂದಿನ ಪಾರಂಪರಿಕ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ವಿವಿಧ ಹೋಟೆಲ್ಗಳಲ್ಲಿ ಮತ್ತು ಅಡುಗೆ ಸಿದ್ಧಪಡಿಸುವ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಉತ್ತಮ ಒಗ್ಗರಣೆಯ ಉತ್ಪನ್ನವಾಗಿ ಬಳಕೆ ಮಾಡುತ್ತೇವೆ. ಅದಲ್ಲದೆ ಸಾಂಬಾರು ಪದಾರ್ಥ ಮತ್ತು ರಸಂ ಮಾಡುವಾಗ ಬೆಳ್ಳುಳ್ಳಿಯನ್ನು ಹೆಚ್ಚು ಬಳಸುತ್ತಾರೆ. ಪಾರಂಪರಿಕ ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿ ,ಕರಿಬೇವು, ಹಸಿಮೆಣಸಿನಕಾಯಿ ಹಾಗೂ ಬ್ಯಾಡಗಿ ಮೆಣಸುಗಳನ್ನು ಬಳಸಿ ಅಡುಗೆಯನ್ನು ಸಿದ್ಧಪಡಿಸುತ್ತಾರೆ. ಆ ಕಾರಣಕ್ಕಾಗಿ ಬೆಳ್ಳುಳ್ಳಿ ಮಹತ್ತರ ಪಾತ್ರ ವಹಿಸುತ್ತದೆ. ಮಹಿಳೆಯರು ಹೆಚ್ಚಾಗಿ ಅಡುಗೆಯನ್ನು ಸಿದ್ಧಪಡಿಸುವಾಗ ಬೆಳ್ಳುಳ್ಳಿ ಸಾಸಿವೆ, ಕಡಲೆ ಬೇಳೆ ಒಗ್ಗರಣೆಯನ್ನು ಉಪಯೋಗಿಸಿದ ನಂತರವೇ ವಿಶೇಷ ರೀತಿಯಲ್ಲಿ ಅಡುಗೆಯನ್ನು ತಯಾರು ಮಾಡುತ್ತಾರೆ. ಕರ್ನಾಟಕದ ಹಾಗೂ ಕರಾವಳಿ ಶೈಲಿಯಲ್ಲಿ ಮಾಡುವ ಉತ್ಪನ್ನಗಳನ್ನು ಬೆಳ್ಳುಳ್ಳಿಸುವುದರಿಂದ ಕಣ್ಣಿಗೆ ತಂಪು ನೀಡುವುದರೊಂದಿಗೆ ತಲೆ…
ತಿರುನೆಲ್ವೇಲಿ: ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಚಿಕನ್ ಬಿರಿಯಾನಿ ತಿನ್ನುತ್ತಿರುವ ಗಣೇಶನ ಬ್ಯಾನರ್ ಹಾಕಿದ್ದ ಅಂಗಡಿಯ ಮಾಲೀಕರೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ವಿನಾಯಕ ಚತುರ್ಥಿಯ ಪ್ರಯುಕ್ತ ಪ್ರಚಾರಕ್ಕಾಗಿ, ತಿರುನೆಲ್ವೇಲಿ-ತಿರುಚೆಂದೂರ್ ಮುಖ್ಯ ರಸ್ತೆಯಲ್ಲಿರುವ ವಿಎಂ ಛತ್ರಂ ಬಳಿಯ ‘ದಿಂಡಿಗಲ್ ಕಲ್ಯಾಣ ಬಿರಿಯಾನಿ’ ಅಂಗಡಿಯ ಹೊರಗೆ ಈ ಬ್ಯಾನರ್ ಅನ್ನು ಹಾಕಲಾಗಿತ್ತು. ಹಬ್ಬದ ಅವಧಿಯಲ್ಲಿ ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ, ಗಣೇಶನು ಬಿರಿಯಾನಿ ತಯಾರಿಸುತ್ತಿರುವ ಫೋಟೋವನ್ನು ಇದರಲ್ಲಿ ಬಳಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬ್ಯಾನರ್ ವೈರಲ್ ಆಗುತ್ತಿದ್ದಂತೆಯೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನಂಗೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಂಪನಿ ಪ್ರಮೋಟರ್ನನ್ನ ಬಂಧಿಸಿದೆ ಎಂದು ವರದಿಯಾಗಿದೆ. ಕೈಲಾಶ್ ಚಂದ್ ಮಂಗಲಾ ಬಂಧಿತ ಕಂಪನಿ ಪ್ರಮೋಟರ್. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 ರ ಸೆಕ್ಷನ್ 19ರ ಅಡಿಯಲ್ಲಿ ಶುಕ್ರವಾರ ಮಂಗಲಾನನ್ನ ಬಂಧಿಸಲಾಗಿದೆ. ಬಳಿಕ ವಿಶಾಖಪಟ್ಟಣಂ ನಲ್ಲಿರುವ ಪಿಎಂಎಲ್ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಕೈಲಾಶ್ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 230 ಕೋಟಿ ಮೌಲ್ಯದ ಕಲಬೆರಕೆ ತುಪ್ಪ ಪೂರೈಕೆ ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. ಟಿಟಿಡಿಗೆ ಕಲಬೆರಕೆ ತುಪ್ಪ ಪೂರೈಸಲು ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪಗಳು ಎಫ್ಐಆರ್ ಉಲ್ಲೇಖವಾಗಿದ್ದವು.
