Author: admin
ತುಳು ಭಾಷೆಗೆ ಮಾನ್ಯತೆ | ಕರಾವಳಿಯ ಜನತೆಯ ಬದುಕಿಗೆ ನವೋದಯ: ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ
ಮಂಗಳೂರು: ಕರಾವಳಿಯ ಮಣ್ಣಿಗೆ ಭಾವನೆಗಳನ್ನು ಕೆರಳಿಸುವ ರಾಜಕಾರಣಕ್ಕಿಂತ ಜನರ ಬದುಕನ್ನು ಹಸನು ಮಾಡುವ ನೈಜ ಅಭಿವೃದ್ಧಿಯ ಸ್ಪರ್ಶ ಬೇಕಿತ್ತು. ಮಂಗಳೂರಿನ ಪವಿತ್ರ ನೆಲದಲ್ಲಿ ಜರುಗಿದ ಸಚಿವ ಸಂಪುಟ ಸಭೆಯ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರಾವಳಿಯ ಕೋಟ್ಯಂತರ ಜನರ ಭಾವನಾತ್ಮಕ ಕನಸುಗಳಿಗೆ ಜೀವ ತುಂಬಿ ಹೊಸ ಇತಿಹಾಸವನ್ನೇ ಬರೆದಿದೆ. “ನಾವು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ, ಬದಲಾಗಿ ಅವರ ಬದುಕಿನ ಏಳಿಗೆಗಾಗಿ ಆಡಳಿತ ನಡೆಸುತ್ತೇವೆ” ಎಂಬ ದೃಢ ಸಂಕಲ್ಪ ಈ ಸಭೆಯ ಪ್ರತಿಯೊಂದು ದಿಟ್ಟ ನಿರ್ಧಾರದಲ್ಲೂ ನಿಚ್ಚಳವಾಗಿ ಸಾಬೀತಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಮಿತಿ ಪದ್ಮರಾಜ್ ಆರ್. ಪೂಜಾರಿ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಆಗಸ್ಟ್ 12 ರಿಂದ 23 ರವರೆಗೆ 16ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್-2026 ನಡೆಯಲಿದ್ದು, ಇದರಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ಜೂನಿಯರ್ ಮಹಿಳಾ ಹಾಕಿ ತಂಡ ಪ್ರಕಟಗೊಂಡಿದೆ. ತಂಡದಲ್ಲಿ ಕೊಡಗು ಜಿಲ್ಲೆಯ ಒಂಬತ್ತು ಪ್ರತಿಭಾವಂತ ಆಟಗಾರ್ತಿಯರು ಸ್ಥಾನ ಪಡೆದುಕೊಂಡಿದ್ದಾರೆ.
ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳು ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಅಂಡರ್-17 ಫುಟ್ಬಾಲ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಹರ್ಷಿತ್ ಬಿ. ನಾಯಕ್, ಸಾಯಿ ತಿಮ್ಮಯ್ಯ, ಜೀವಿತ್ ಚಂಗಪ್ಪ ಹಾಗೂ ಶೋಬಿತ್ ಕೆ.ಎಲ್. ಅವರು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವುದು ಶಾಲೆ ಹಾಗೂ ಕೊಡಗು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಉಡುಪಿ: ತುರ್ತು ಸಂದರ್ಭಗಳಲ್ಲಿ, ವಿಶೇಷವಾಗಿ ‘ಗೋಲ್ಡನ್ ಅವರ್’ನಲ್ಲಿ ರೋಗಿಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ತುರ್ತು ಕರೆ ಬಂದ ಬಳಿಕ 15 ನಿಮಿಷದೊಳಗೆ ಅಂಬುಲೆನ್ಸ್ ಸ್ಥಳಕ್ಕೆ ತಲುಪುವಂತೆ ಮಾರ್ಗಸೂಚಿ ರೂಪಿಸಲಾಗುವುದು. ನಿಗದಿತ ಸಮಯದಲ್ಲಿ ತಲುಪದಿದ್ದರೆ ಸಂಬಂಧಿತ ಆಂಬ್ಯುಲೆನ್ಸ್ ಚಾಲಕನಿಗೆ 5,000 ರೂಪಾಯಿ ದಂಡ ವಿಧಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಘೋಷಿಸಿದ್ದಾರೆ. ರಸ್ತೆ ಅಪಘಾತಗಳು, ಹೆರಿಗೆ ಸಂಬಂಧಿತ ತುರ್ತು ಪರಿಸ್ಥಿತಿಗಳು ಮತ್ತು ಹೃದಯಾಘಾತದಂತಹ ಗಂಭೀರ ಸನ್ನಿವೇಶಗಳಲ್ಲಿ ಆಂಬ್ಯುಲೆನ್ಸ್ ತಡವಾಗಿ ಬರುವುದರಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ಸಾರ್ವಜನಿಕರಲ್ಲಿ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಕ್ಯಾಬಿನೆಟ್‌ನಲ್ಲಿ ಮಾರ್ಗಸೂಚಿ ಅನುಮೋದನೆಗೊಂಡ ಬಳಿಕ, ಮೂರು ತಿಂಗಳೊಳಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
ವಿಶನ್ ಕೊಂಕಣಿ ನಿರ್ಮಾಣದ ದಾಯ್ಜಿವರ್ಲ್ಡ್ ಫಿಲ್ಮ್ಸ್ ಬ್ಯಾನರಿನಡಿ ತಯಾರಾದ ಬಹುನಿರೀಕ್ಷಿತ ಕೊಂಕಣಿ ಚಿತ್ರ ’ಬಾಪಾಚೆ ಪುತಾಚೆ ನಾಂವಿಂ’ ನವೆಂಬರ್ 28ರಂದು ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ತೆರೆಕಾಣಲಿದೆ. ಚಿತ್ರವು ಈಗಾಗಲೇ ಹಲವು ಪ್ರೀಮಿಯರ್ ಪ್ರದರ್ಶನಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಪ್ರೇಕ್ಷಕರಿಂದ ಹಾಗೂ ಸಿನೆಮಾ ವಿಶ್ಲೇಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಯುವ ಸಾಹಿತಿ, ಪತ್ರಕರ್ತ ಸ್ಟ್ಯಾನಿ ಬೇಳ ಬಾಪಾಚೆ ಪುತಾಚೆ ನಾಂವಿಂ ಚಿತ್ರಕ್ಕೆ ಕಥೆ , ಸಂಭಾಷಣೆ ಬರೆದು, ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂಜಯ್ ರಾಡ್ರಿಗಸ್ ಹಿನ್ನಲೆ ಸಂಗೀತವಿದೆ. ಯುವ ಛಾಯಾಗ್ರಾಹಕ ಜೋಯಲ್ ಶಮನ್ ಕ್ಯಾಮೆರಾ ಚಲಾಯಿಸಿದ್ದಾರೆ. ಉಡುಪಿ, ಪುತ್ತೂರು ಹಾಗೂ ದೇರಳಕಟ್ಟೆಯಲ್ಲಿ ಡಿಸೆಂಬರ್ 5ರಂದು ಚಿತ್ರವು ತೆರೆಕಾಣಲಿದೆ ಎಂದು ನಿರ್ಮಾಣ ಸಂಸ್ಥೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ
ಗುರುದತ್ತ ಗಾಣಿಗ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಕರಾವಳಿ ಚಿತ್ರ ಜುಲೈ 24 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ, ಜುಲೈ 25ರಂದು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಸು ಫ್ರಮ್ ಸೋ’ ಚಿತ್ರ ಸ್ಯಾಂಡಲ್‌ವುಡ್‌ಗೆ ಹೊಸ ಚೈತನ್ಯ ತುಂಬಿತ್ತು. 6 ಕೋಟಿ ಬಜೆಟ್‌ನ ಈ ಚಿತ್ರ 100 ಕೋಟಿ ಕಲೆಕ್ಷನ್ ಮಾಡಿತ್ತು. ಒಂದು ವರ್ಷದ ನಂತರ ಕರಾವಳಿ ಪ್ರದೇಶದ ಕಥಾಹಂದರ ಹೊಂದಿರುವ ಮತ್ತೊಂದು ಕನ್ನಡ ಚಿತ್ರ ಬಿಡುಗಡೆಯಾಗಲಿದ್ದು, ವ್ಯಾಪಕ ನಿರೀಕ್ಷೆಗಳನ್ನು ಮೂಡಿಸಿದೆ. ಸು ಫ್ರಮ್ ಸೋ ಚಿತ್ರ ಕಳೆದ ವರ್ಷ ಜುಲೈ-25,2025 ರಂದು ತೆರೆ ಕಂಡಿತ್ತು, ಈ ವರ್ಷ ಜುಲೈ-25 ‘ಕರಾವಳಿ’ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನಿಂದ ಹೆಚ್ಚು ಗಮನ ಸೆಳೆದಿದೆ.
‘ಟಗರು’ನಲ್ಲಿ ಸರೋಜಾ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತ್ರಿವೇಣಿ ರಾವ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಚಿತ್ರರಂಗದಲ್ಲಿ ಸಕ್ರಿಯವಾಗಿರುವ ತ್ರಿವೇಣಿ ರಾವ್, ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇವ್ ಅವರೊಂದಿಗೆ ವಿವಾಹವಾಗಿದ್ದಾರೆ ಎನ್ನಲಾಗಿದೆ. ದೆಹಲಿ ನಗರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಜೂನ್ 24 ರಂದು ಅಗರ್ತಲಾದ ಪಂಚತಾರಾ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಬಿಜೆಪಿಯ ಹಿರಿಯ ನಾಯಕರು, ಸಚಿವರು ಮತ್ತು ಬಾಲಿವುಡ್‌ನ ಹಲವು ತಾರೆಯರು ಬಂದು ನವ ಜೋಡಿಗೆ ಶುಭ ಕೋರಲಿದ್ದಾರೆ.
ಫೆ. 6ರಂದು ಬಹುನಿರೀಕ್ಷಿತ “ನಾನ್ವೆಜ್” ತುಳು ಸಿನಿಮಾ ಬಿಡುಗಡೆ: ಮಲ್ಪಿಪ್ಲೆಕ್ಸ್ನಲ್ಲಿ ಕೇವಲ 99 ರೂ. ಟಿಕೇಟು!
ಜಯಕಿರಣ ಫಿಲಂಸ್ ಲಾಂಛನದಲ್ಲಿ , ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಅದ್ಭುತವಾಗಿ ಸಿದ್ಧಗೊಂಡಿರುವ ನಾನ್ ವೆಜ್ ತುಳು ಸಿನಿಮಾ ಫೆಬ್ರವರಿ 6ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ, ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್‌ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ.
ಮಂಗಳೂರು: ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಹಿರಿಯ ರಂಗಕರ್ಮಿ ಡಾ.ದೇವದಾಸ್ ಕಾಪಿಕಾಡ್ ಅವರು, “ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಜೈ ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಂದು ತುಳು ಸಿನಿಮಾಕ್ಕೂ ಬೆಂಬಲ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ತುಳುವರು ಸಿನಿಮಾ ನೋಡುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು” ಎಂದರು.
ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ ‘ಗಜಾನನ ಕ್ರಿಕೆಟರ್ಸ್’ (ಜಂತೊಟ್ಟು ಸಿನ್ಸ್ 1983) ತುಳು ಚಲನಚಿತ್ರವು ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿದೆ. ಭಾರತ್ ಸಿನಿಮಾಸ್ ನಲ್ಲಿ ಸಿನಿಮಾದ ಬಿಡುಗಡೆ ಸಮಾರಂಭ ಜರಗಿತು. ಅತಿಥಿಗಳು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು. ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ಮಾತನಾಡಿ, ತುಳು ಸಿನಿಮಾ ರಂಗದಲ್ಲಿ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಕಿರಿಯರು, ಹೊಸಬರು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಯುವ ಪ್ರತಿಭಾವಂತರು ಸಿನಿಮಾರಂಗದಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಚೆನ್ನಾಗಿ ಆಡಲಿ ಎಂದರು. ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ಗಜಾನನ ಕ್ರಿಕೆಟರ್ಸ್ ಸಿನಿಮಾದ ಪ್ರೀಮಿಯರ್ ಶೋಗಳನ್ನು ಪ್ರೇಕ್ಷಕರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
