Close Menu
    What's Hot

    ಬಂಗಾಳಿ ಧೋತಿ ಧರಿಸಿ ದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿದ ಪ್ರಧಾನಿ: ಬಂಗಾಳದ ಗೆಲುವು ಐತಿಹಾಸಿಕವೆಂದ ಮೋದಿ

    May 6, 2026

    ಬೆಂಗಳೂರು ಬೌರಿಂಗ್ ಆಸ್ಪತ್ರೆ ದುರಂತ: ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

    May 6, 2026

    ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ

    May 6, 2026
    Facebook X (Twitter) Instagram
    Facebook X (Twitter) Instagram
    janathadwanijanathadwani
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    janathadwanijanathadwani
    Home»ಅಪರಾಧ»ಕಪ್ಪರ್ ರುಟ್ಟಿ
    ಅಪರಾಧ

    ಕಪ್ಪರ್ ರುಟ್ಟಿ

    adminBy adminMay 5, 2026No Comments1 Min Read

    ತಿನಸು ಒಂದೇ, ನಾಮ ಹಲವು. ಹಾಗೊಂದು ತುಳುವರ ಅಚ್ಚು ಮೆಚ್ಚಿನ ತಿಂಡಿಯೇ ಕಪ್ಪರುಟ್ಟಿ. ನಮ್ಮ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಪುಂಡಿ, ನೀರ್ ದೋಸೆ, ಗಟ್ಟಿ (ಕಡುಬು)ಗಳಿಗೆ ಸಮದಂಡಿಯಾದ ಮತ್ತೊಂದು ತಿಂಡಿಯೇ ಈ ಕಪ್ಪರ್‌ರುಟ್ಟಿ. ಮೂವತ್ತು ನಲ್ವತ್ತು ವರ್ಷಗಳ ಹಿಂದೆ ಇಡ್ಲಿ, ಅಪ್ಪ ಇತ್ಯಾದಿ ಉಪಹಾರಗಳ ಎದುರು ಈ ತಿಂಡಿಗೆ ಸ್ವಲ್ಪ ಮರ್ಯಾದಿ ಕಡಿಮೆ. ನಮಗೆ ಇವತ್ತು ಚಾದೊಂದಿಗೆ ತಿಂಡಿ ‘ಕಪ್ಪರುಟ್ಟಿ’ ಎಂದು ಮೈಯನ್ನೆಲ್ಲಾ ಹಿಡಿಮಾಡಿ ಹೇಳುವ ಕಾಲ ಇತ್ತು. ‘ಬಲ್ಲವರೆ ಬಲ್ಲರು ಬೆಲ್ಲದ ಸವಿಯ’ ಎಂಬಂತೆ, ತಿಂದವನೇ ಬಲ್ಲ ಕಪ್ಪರುಟ್ಟಿಯ ಸವಿ ರುಚಿ. ಕಪ್ಪಲ್+ರುಟ್ಟಿ = ಕಪ್ಪರುಟ್ಟಿ, ಲೋಪ ಸಂಧಿ. ಕಪ್ಪಲ್ ಅಂದರೆ ಒಡೆದ ಮಣ್ಣಿನ ಹಂಡೆ (ಗುರ್ಕೆ), ಅಗೋಲಿ (ದೊಡ್ಡ ಮಡಕೆ) ಇವುಗಳ ಬಾಣಲೆ ಯಾ ಕಾವಲಿಯಂತಹ ಭಾಗ. ಕಪ್ಪರುಟ್ಟಿಯನ್ನು ದಕ್ಷಿಣ ಕನ್ನಡದ ಕೆಲವೆಡೆ ‘ಉಪ್ಪು ದೋಸೆ’ ಎಂದು ಕರೆದರೆ, ತೆಂಕಿನ ಪುತ್ತೂರು ಕಡೆಯವರು ‘ಓಡ್ ಪಾಲೆ’ ಅಂತ ಕರೆಯುತ್ತಾರೆ. ಅವರಿಗಿಂತ ಸ್ವಲ್ಪ ಬಡಗಿನವರು ‘ಓಡುದ ಅಡ್ಡೆ’ (ತಿಂಡಿ) ಅನ್ನುತ್ತಾರೆ. ಹೌದು, ಕಪ್ಪಲ್ ಅನ್ನು ‘ಓಡು’ ಅಂತಲೂ ಹೇಳುತ್ತಾರೆ. ಹಡಗಿಗೂ ತುಳುವಿನಲ್ಲಿ ‘ಕಪ್ಪಲ್’ ಎನ್ನುತ್ತಾರೆ. ಬಾಣಲೆಯಂತಹ ಮಧ್ಯೆ ಆಳವಾಗಿರುವ, ಕಾವಲಿಗಿಂತ ಉದ್ದವಾಗಿರುವ, ನೀರಲ್ಲಿ ತೇಲುವ ರಚನೆಗೆ ಬಹುಶಃ ಕಪ್ಪಲ್ ಎಂದು ಕರೆದಿರಬಹುದು. ‘ಕಪ್ಪಲ್ ದಿಂಜಾವರೆ ಪೋತಿನಾಯೆ (ಪಿರ) ಬಯಿದೆಗೆ, ಬಂಜಿ ದಿಂಜಾವರೆ ಪೋತಿನಾಯೆ ಬಯಿದುಜುಗೆ’ (ಕಪ್ಪಲ್ ತುಂಬಿಸಲು ಹೋದವ ಹಿಂತಿರುಗಿದ್ದಾನೆ, ಹೊಟ್ಟೆ ತುಂಬಿಸಲು ಹೋದವ ಹಿಂತಿರುಗಿಲ್ಲ) ಅಂತ ಗಾದೆಯೇ ಇದೆಯಲ್ಲಾ? ಅಂತಿರ್ಪ ತುಳುವರ ಹೆಮ್ಮೆಯ ಕಪ್ಪರುಟ್ಟಿಯನ್ನು ತಿನ್ನದಿರುವವರು ಬಹು ವಿರಳ ಎಂದೇ ಹೇಳಬಹುದು. ಆದರೆ ಎಷ್ಟು ಮಂದಿಗೆ ಈ ಉಪಹಾರ ತಯಾರಿಸಲು ಗೊತ್ತು? ಈಗೆಲ್ಲಾ ಒಡೆದ ಮಡಕೆಯ ತುಂಡು (ಕಪ್ಪಲ್) ಎಲ್ಲಿ ಸಿಗುತ್ತದೆ?

    Previous Articleಹತ್ತಾರು ಕ್ಷೇತ್ರಗಳ ಸಾಧಕ, ಸಂಪನ್ಮೂಲ ವ್ಯಕ್ತಿತ್ವದ ಸತೀಶ್ ಆನಂದ ಶೆಟ್ಟಿ ‘ಅಣ್ಣಾ’
    Next Article ಮುಟ್ಟಿನ ಸಮಯದ ಹೊಟ್ಟೆನೋವು

    Related Posts

    ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    May 6, 2026

    ನೇಪಾಳದಲ್ಲಿ ಕಂದಕಕ್ಕೆ ಉರುಳಿದ ಜೀಪ್ ;20 ಮಂದಿ ಸಾವು

    May 6, 2026

    ಮೇ 9 -10: ಸುರತ್ಕಲ್ ನಲ್ಲಿ ರಾಜ್ಯಮಟ್ಟದ “ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ – 5” ಹಿರಿಯರ ಕ್ರಿಕೆಟ್ ಹಬ್ಬ

    May 6, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬಂಗಾಳಿ ಧೋತಿ ಧರಿಸಿ ದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿದ ಪ್ರಧಾನಿ: ಬಂಗಾಳದ ಗೆಲುವು ಐತಿಹಾಸಿಕವೆಂದ ಮೋದಿ

    May 6, 2026

    ಬೆಂಗಳೂರು ಬೌರಿಂಗ್ ಆಸ್ಪತ್ರೆ ದುರಂತ: ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

    May 6, 2026

    ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ

    May 6, 2026

    ಲಾಂಛನದಲ್ಲಿ ಈ ಹಿಂದೆ ತೆರೆಕಂಡ ‘ತುಡರ್’ ಯಶಸ್ವಿ ಪ್ರದರ್ಶನ ದಾಖಲಿಸಿದೆ. ಅದೇ ತಂಡದಿಂದ

    May 6, 2026
    Advertisement

    ಸಾಧಕರ ಪರಿಚಯವನ್ನು ದೇಶ ವಿದೇಶದಲ್ಲಿ ನೆಲೆಸಿರುವ ಬಂಟ ಬಾಂಧವರಿಗೆ ತಲುಪಬೇಕೆಂಬ ಸದುದ್ದೇಶವನ್ನಿಟ್ಟುಕೊಂಡು ಬಂಟ್ಸ್ ನೌ ಎಂಬ ಅಂತರ್ಜಾಲ ಮಾಧ್ಯಮವು ರಂಜಿತ್ ಶೆಟ್ಟಿ ಅವರ ವ್ಯವಸ್ಥಾಪಕ ಸಂಪಾದಕತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

    Top Insights

    ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಮೇ 10 ರಂದು ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ದಂಪತಿಗೆ ಸನ್ಮಾನ

    May 5, 2026

    ಆಳ್ವಾಸ್ ಪತ್ರಿಕೋದ್ಯಮ ವಿಭಾಗ : ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ’ ಎಂಬ ವಿಚಾರ ಸಂಕಿರಣ

    May 5, 2026
    Social Follow
    • Facebook
    • Twitter
    • Pinterest
    © 2026 Janatha dwani. Designed by Bluelinecomputers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ

    Type above and press Enter to search. Press Esc to cancel.